Arise! Awake! and stop not until the goal is reached.
“ಮುನ್ನಡೆಗಾಗಿ ಮುನ್ನುಡಿ” -ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಶ್ರೀಯುತ ಸು .ರಾಮಣ್ಣ
ವಿವೇಕಾನಂದ ಮಹಿಳಾ ವಸತಿ ನಿಲಯದಲ್ಲಿ ದಿನಾಂಕ 15.1.2029ರಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ “ಮುನ್ನಡೆಗಾಗಿ ಮುನ್ನುಡಿ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಶ್ರೀಯುತ ಸು.ರಾಮಣ್ಣ ಇವರು ಉಪಸ್ಥಿತರಿದ್ದರು ಹಾಗೂ ನಮ್ಮ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀಯುತ ಅಚ್ಚುತ್ ನಾಯಕ್ ಹಾಗೂ ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ರಮೇಶ್ ಪ್ರಭು ಇವರು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಸು.ರಾಮಣ್ಣ ರವರು ಒಬ್ಬಳು ಗೃಹಣಿಯಾದವಳು ಜೀವನದಲ್ಲಿ ಹೇಗಿರಬೇಕು ಮತ್ತು ಜೀವನದಲ್ಲಿ ಆಯ್ಕೆ ಮಾಡಿಕೊಳ್ಳುವ ದಾರಿ ಹೇಗಿರಬೇಕು ಹಾಗೂ ಭಾರತೀಯ ಸಂಸ್ಕೃತಿಯನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿಕೊಟ್ಟರು. ಕಾರ್ಯಕ್ರಮದ ಕೊನೆಯ ಅಂಗವಾಗಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಲ್ಲರಿಗೂ ಎಳ್ಳು-ಬೆಲ್ಲ ಕೊಟ್ಟು ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಸುಸೂತ್ರವಾಗಿ ಕೊನೆಗೊಂಡಿತು.