ವಿವೇಕಾನಂದ ವಸತಿನಿಲಯ ದೀಪಾಲಂಕೃತವಾದ – ತುಳಸಿ ಪೂಜೆ

ಭಾರತೀಯ ಸಂಸ್ಕೃತಿಯು ಇಲ್ಲದಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಸಂಸ್ಕೃತಿಯ ಮುಖ್ಯ ಅಂಶವನ್ನು ಮುಂದಿಟ್ಟುಕೊಂಡು ವಿವೇಕಾನಂದ ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದೀಪಾಲಂಕೃತವಾದ ತುಳಸಿ ಪೂಜೆಯನ್ನು ಅತ್ಯುನ್ನತ ರೀತಿಯಲ್ಲಿ ನಡೆಸಲಾಯಿತು.ತುಳಸಿ ಪೂಜೆಯ ಅಂಗವಾಗಿ ಮುಂಜಾನೆ  ವಸತಿ ನಿಲಯಗಳಲ್ಲಿ ಗಣಪತಿ ಹವನವು ನಡೆಯಿತು.ಈ ಕಾರ್ಯಕ್ರಮದಲ್ಲಿ ನಮ್ಮ ವಸತಿ ನಿಲಯದ ಅಧ್ಯಕ್ಷರಾದ ರಮೇಶ್ ಪ್ರಭು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಅಚ್ಚುತ್ ನಾಯಕ್ ಇವರು ಉಪಸ್ಥಿತರಿದ್ದರು.

ಒಗ್ಗಟ್ಟಿನ ಮಹತ್ವವನ್ನು ವ್ಯಕ್ತಪಡಿಸಿಕೊಂಡು ವಸತಿ ನಿಲಯದ ಮಕ್ಕಳು ಒಟ್ಟು ಸೇರಿ ಮಾವಿನ ಎಲೆಗಳ ತೋರಣಗಳಿಂದ ವಸತಿ ನಿಲಯವನ್ನು ಅಲಂಕರಿಸಿದರು.ಅದೇ ರೀತಿಯಲ್ಲಿ ತುಳಸಿ ಕಟ್ಟೆಯ ಎದುರು ರಂಗೋಲಿಯನ್ನು ಹಾಕಿ, ಕತ್ತಲನ್ನು ದೂರ ಪಡಿಸುವ ಬೆಳಕಿನ ಸಂಕೇತವಾಗಿ ಹಣತೆಯನ್ನು ಬೆಳಗಿಸಿದರು.

ನಂತರ ಸಂಜೆ 7 ಗಂಟೆಗೆ ಭಜನೆ ಹಾಗೂ ಕುಣಿತ ಭಜನೆಗಳಿಂದ ಕಾರ್ಯಕ್ರಮ ಮುಂದುವರೆಯಿತು. ನಂತರ ತುಳಸಿ ಕಟ್ಟೆಗೆ ಪೂಜೆ ಮಾಡಿ ಪ್ರಸಾದ ವಿತರಿಸಲಾಯಿತು.ರಾತ್ರಿ 8 ಗಂಟೆಯ ನಂತರ ಸಿಡಿಮದ್ದು ಪ್ರದರ್ಶನ ನಡೆಯಿತು. ನಂತರ ಸಿಹಿ ಊಟದೊಂದಿಗೆ ಈ ತುಳಸಿ ಹಬ್ಬವನ್ನು ಸಂಭ್ರಮಿಸುತ್ತ ಕೊನೆಗೊಳಿಸಿದೆವು.

         

ಈ ವಿಶೇಷ ಕಾರ್ಯಕ್ರಮದಿಂದಾಗಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರಿತುಕೊಂಡರು.ಸಂಸ್ಕೃತಿಯು ಯಾವತ್ತು ಮರೆಯಾಗದ ಹಾಗೆ ಎಂದಿಗೂ ನೆಲೆ ನಿಲ್ಲಬೇಕು ಎಂಬುದು ನಮ್ಮೆಲ್ಲರ ಗುರಿಯಾಗಿರುತ್ತದೆ.

ವಿವೇಕಾನಂದ ವಿದ್ಯಾಸಂಸ್ಥೆ ಒಬ್ಬ ವ್ಯಕ್ತಿಯ ಸ್ವತ್ತಲ್ಲ-ಡಾ. ಕಲ್ಲಡ್ಕ ಪ್ರಭಾಕರ ಭಟ್.

ವಿವೇಕಾನಂದ ವಿದ್ಯಾಸಂಸ್ಥೆ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಮಾಜದ ಹಲವರ ಸಹಕಾರದಿಂದ ನಡೆಯುತ್ತಿರುವಂತಹ ಸಂಸ್ಥೆ. ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಹಲವು ಕಡೆಯಿಂದ ಬಂದು ವಸತಿ ನಿಲಯಗಳಲ್ಲಿ ಆಶ್ರಯ ಪಡೆಯುವ ಮಕ್ಕಳಿಗೆ ಇದು ನಮ್ಮ ಮನೆಯೆಂಬ ಭಾವನೆ ಬರಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ವಿವೇಕಾನಂದ ವಸತಿ ನಿಲಯದ ನವೀಕೃತ ಪಾಕಶಾಲೆಯನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.

ವಸತಿ ನಿಲಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳೂ ಮಹತ್ವವಾದದ್ದೇ ಆಗಿವೆ. ಎಲ್ಲಾ ವ್ಯವಸ್ಥೆ ಸರಿಯಾಗಿ ಆದಾಗ ಮಾತ್ರ ಮಕ್ಕಳಿಗೆ ಮತ್ತು ಪೋಷಕರಿಗೆ ಸಂಸ್ಥೆಯ ಬಗ್ಗೆ ಗೌರವ ಮೂಡುತ್ತದೆ. ಅಂತಹ ಸಾತ್ವಿಕ ವಾತಾವರಣವನ್ನು ನಿರ್ಮಿಸಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದಕ್ಕಾಗಿ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪರಿಚಾರಕಿಯರಿಗೆ ಮತ್ತು ಬಾಣಸಿಗರಿಗೆ ವಸ್ತ್ರವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಖಜಾಂಚಿ ಅಚ್ಯುತ್ ನಾಯಕ್, ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ವಸತಿನಿಲಯಗಳ ನಿಲಯ ಪಾಲಕರು ಉಪಸ್ಥಿತರಿದ್ದರು. ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಶಿವಕುಮಾರ್ ಪ್ರಸ್ಥಾವನೆಗೈದರು. ವಿದ್ಯಾರ್ಥಿನಿ ಅಕ್ಷತಾ ವೈಯಕ್ತಿಕ ಗೀತೆ ಹಾಡಿದರು. ಮುಖ್ಯ ವಸತಿನಿಲಯ ಪಾಲಕ ಚೇತನ್ ಸ್ವಾಗತಿಸಿ, ನಿಲಯ ಪಾಲಕಿ ಗೀತಾಶ್ರೀ ವಂದಿಸಿದರು. ನಿಲಯ ಪಾಲಕಿ ವರ್ಷ ನಿರೂಪಿಸಿದರು

.